ಕೆ ಚಂದ್ರಶೇಖರ್ ರಾವ್ (ಕಲ್ವಕುಂಟ್ಲ ಚಂದ್ರಶೇಖರ ರಾವ್‌, ಕೆಸಿಆರ್ )(ಜನನ ೧೯೫೪ ರ ಫೆಬ್ರವರಿ ೧೭) ತೆಲಂಗಾಣ ರಾಜ್ಯದ ಮೊದಲ ಮತ್ತು ಪ್ರಸ್ತುತ ಮುಖ್ಯಮಂತ್ರಿ . ಭಾರತ್ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ,ಮೇಡಕ್ ಜಿಲ್ಲೆಯ ಗಜ್ವಾಲ್ ಕ್ಷೇತ್ರದ ಶಾಸಕರಾಗಿದ್ದಾರೆ.ಜೂನ್ ೨, ೨೦೧೪ ರಂದು ತೆಲಂಗಾಣ ,ಹೊಸ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. == ಬಾಲ್ಯ ಜೀವನ == ರಾವ್ ಮೇಡಕ್ ಜಿಲ್ಲೆಯ ಸಿದ್ದಿಪೇಟ ಮಂಡಲ್ ನ , ಚಿಂಟಮಡಕ ಗ್ರಾಮದಲ್ಲಿ ೧೭ ಫೆಬ್ರವರಿ ೧೯೫೪ ರಂದು ಜನಿಸಿದರು .ಒಸ್ಮಾನಿಯಾ ಆರ್ಟ್ಸ್ ಕಾಲೇಜ್ ,ಉಸ್ಮಾನಿಯಾ ವಿಶ್ವವಿದ್ಯಾಲಯನಿಂದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. == ಕಾಂಗ್ರೆಸ್ ಪಕ್ಷ == ಕೆಸಿಆರ್ ಮೇಡಕ್ ಜಿಲ್ಲೆಯ ಯುವ ಕಾಂಗ್ರೆಸ್ ಪಕ್ಷದಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.ನಂತರ . ರಾವ್ ನೇತೃತ್ವದ ತೆಲುಗುದೇಶಂ ಪಕ್ಷ ಸೇರಿದರು. == ತೆಲುಗು ದೇಶಂ ಪಕ್ಷ == ಕೆಸಿಆರ್ ೧೯೮೩ ರಲ್ಲಿ ಟಿಡಿಪಿ ಸೇರಿದರು ಮತ್ತು ಎ ಮದನ್ ಮೋಹನ್ ವಿರುದ್ಧ ಸ್ಪರ್ಧಿಸಿ ಆ ಚುನಾವಣೆಯಲ್ಲಿ ಸೋತರು. ಅವರು ೧೯೮೫ ಮತ್ತು ೧೯೯೯ ರ ಮಧ್ಯೆ ಸಿದ್ದಿಪೇಟ್ ನಿಂದ ಸತತ ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ.೧೯೮೭-೧೯೮೮ ರಿಂದ ಎನ್.ಟಿ.ರಾಮ ರಾವ್ ಸಂಪುಟದಲ್ಲಿ ಬರ ಮತ್ತು ಪರಿಹಾರ, ೧೯೯೬ ರಲ್ಲಿ ಅವರು ಚಂದ್ರಬಾಬು ನಾಯ್ಡು ಅವರ ಸಂಪುಟದಲ್ಲಿ ಸಾರಿಗೆ ಮಂತ್ರಿಯಾಗಿ ಮತ್ತು ೨೦೦೦-೨೦೦೧ ಆಂಧ್ರ ಪ್ರದೇಶ ವಿಧಾನಸಭೆಯ ಉಪಸಭಾಪತಿ ಕಾರ್ಯನಿರ್ವಹಿಸಿದರು. == ಭಾರತ್ ರಾಷ್ಟ್ರ ಸಮಿತಿ == ೨೭ ಏಪ್ರಿಲ್ ೨೦೦೧ ರಂದು, ರಾವ್ ಉಪ ಸ್ಪೀಕರ್, ಟಿಡಿಪಿ ಶಾಸಕ ಮತ್ತು ಟಿಡಿಪಿ ಪಕ್ಷಕ್ಕೆ ರಾಜೀನಾಮೆ ನೀಡಿದರು. ಅವರು ತೆಲಂಗಾಣ ಪ್ರತ್ಯೇಕ ರಾಜ್ಯ ಸಾಧಿಸಲು ಹೈದರಾಬಾದ್ ನಲ್ಲಿ ಭಾರತ್ ರಾಷ್ಟ್ರ ಸಮಿತಿ () ಪಕ್ಷವನ್ನು ಸ್ಥಾಪಿಸಿದರು. == ವೈಯಕ್ತಿಕ ಜೀವನ == ಕೆ ಚಂದ್ರಶೇಖರ್ ರಾವ್ ,ಶೋಭಾರನ್ನು ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ.ಅವರ ಮಗ, ಕೆ.ಟಿ.ರಾಮರಾವ್,ಮಗಳು ಕವಿತಾ . == ರಾಜಕೀಯ == ಸೋಲು ೧೯೮೩ ಸಿದ್ದಿಪೇಟ್ == ಪ್ರಶಸ್ತಿಗಳು == ಸಿಎನ್ಎನ್-ಐಬಿಎನ್ ಭಾರತದ ವರ್ಷದ ವಕ್ತಿ - ೨೦೧೪ == ಉಲ್ಲೇಖಗಳು ==